ಬೆಂಗಳೂರು ಉತ್ತರ: ಅಶ್ವಿನ್ ವೈಷ್ಣವ್ ಒಂದು ಸೆಮಿಕಂಡೆಕ್ಟ್ ಕೊಡಲಿ: ನಗರದಲ್ಲಿ ಎಂ.ಬಿ ಪಾಟೀಲ್ ಆಗ್ರಹ
ಫಾಕ್ಸ್ ಕಾನ್ ಸಂಬಂಧ ಬಿಜೆಪಿ, ಕಾಂಗ್ರೆಸ್ ನಡುವೆ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಶನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಫಾಕ್ಸ್ ಕಾನ್ ಅವರನ್ನು ನಾವು ಬಹಳ ದಿನಗಳಿಂದ ಮನವೊಲಿಸುವ ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರದ ಪ್ರಯತ್ನ ಇದು. ಅಶ್ವಿನ್ ವೈಷ್ಣವ್ ಮೊದಲು ಒಂದು ಸೆಮಿ ಕಂಡಕ್ಟರ್ ಕೊಡಲಿ. ಆಮೇಲೆ ಇದರ ಕ್ರೆಡಿಟ್ ತೆಗೆದುಕೊಳ್ಳಲಿ. ಅದು ಬಿಟ್ಟು ನಮ್ಮ ಕೆಲ್ಸಕ್ಕೆ ಅವರು ಕ್ರೆಡಿಟ್ ತೆಗೆದುಕೊಳ್ಳುವುದು ಶೋಭೆ ತರೋದಿಲ್ಲ. ಸೆಮಿ ಕಂಡಕ್ಟರ್ ಕೊಟ್ಟು ಕ್ರೆಡಿಟ್ ತೆಗೆದುಕೊಳ್ಳಲಿ ಎಂದು ವಿನಂತಿಸುತ್ತೇನೆ. ಅಷ್ಟಕ್ಕೂ ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿ ಇದನ್ನ ಯಾಕೆ ಮಾಡಲಿಲ್ಲ ಎಂದರು.