ಬೀಳಗಿ: ಗಲಗಲಿ ಗ್ರಾಮದಲ್ಲಿ ರಾತ್ರಿ ನಡೆದಿದ್ದ ನಿಗೂಢ ಕೊಲೆ ಕೇಸ್ ಬೇಧಿಸಿದ ಬೀಳಗಿ ಪೊಲೀಸರು, ಗೆಳೆಯನೇ ಗೆಳೆಯನಿಗೆ ಇಟ್ಟಿದ್ದ ಮಹೂರ್ತ
Bilgi, Bagalkot | Sep 27, 2025 ಊರ ಹೊರಗೆ ಎಣ್ಣೆ ಪಾರ್ಟಿ ನಂತರ ಸ್ನೇಹಿತನನ್ನ ಕೊಲೆ ಮಾಡಿದ ಪ್ರಕರಣವನ್ನ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಕಳೆದ ಸೆ.12.ರಂದು ಗೆಳೆಯರಿಬ್ಬರು ಊರ ಹೊರಗೆ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ರಾತ್ರಿ ಕುಡಿದ ನಶೆಯಲ್ಲಿ ಇಬ್ಬರೂ ತೇಲಾಡುತ್ತ ಮನೆ ಸೇರಿದ್ದಾರೆ.ಕೊಲೆಯಾದ ಬಸಯ್ಯ ಮಠಪತಿಯ ಯಾರೂ ಇಲ್ಲದ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಮಾರನೇ ದಿನ ಬಸಯ್ಯ ಮಠಪತಿ(34) ಕೊಲೆ ನಡೆದು ಹೋಗಿದೆ.ತಲೆಗೆ ಬಲವಾಗಿ ಹೊಡೆದು ಕೊಲೆ ಗೈಯಲಾಗಿದೆ. ಕೊಲೆಯಾದ ಗೆಳೆಯನ ಜೊತೆಗಿದ್ದ ಮತ್ತೊಬ್ಬ ಗೆಳೆಯ ಬಸವರಾಜ ಲಿಂಗನೂರ ಬೆಳಗಾಗುವಷ್ಟರಲ್ಲಿ ಎಸ್ಕೇಪ ಆಗಿದ್ದಾನೆ.ಕತ್ತಲ ರಾತ್ರಿ ನಡೆದ ಕರಾಳ ಘಟನೆ ಹೊರ ಪ್ರಪಂಚಕ್ಕೆ ನಿಗೂಢವಾಗಿತ್ತು.