ನಗರದಲ್ಲಿ ವೃದ್ಧನ ಮೇಲೆ ಬೀದಿ ನಾಯಿ ಡೆಡ್ಲಿ ಅಟ್ಯಾಕ್. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ನಾಯಿ ಕಡಿತಕ್ಕೊಳಗಾದ ಜ್ಯೋತಿಬಾ ಅವರು ಆಗ್ರಹಿಸಿದ್ದಾರೆ. ದೊಡ್ಡವರಿಗೇ ಹೀಗಾದರೆ, ಮಕ್ಕಳಿಗೆ ಆದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ. ಮಂಗಳವಾರ ಬೆಳಗಾವಿಯ ಹಿಂದವಾಡಿಯ ಜೇಡ ಗಲ್ಲಿಯಲ್ಲಿ ವಾಯು ವಿಹಾರ ನಡೆಸುತ್ತಿದ್ದ 70 ವರ್ಷದ ಜ್ಯೋತಿಬಾ ರೇಡೇಕರ ಅವರು ಬೀದಿ ನಾಯಿ ದಾಳಿಗೆ ಒಳಗಾಗಿದ್ದಾರೆ. ಚರ್ಚ್ ಬಳಿ ಹಿಂದಿನಿಂದ ಬಂದ ನಾಯಿ ಅವರ ಕಾಲಿಗೆ ಕಚ್ಚಿದೆ.