ಹುಣಸಗಿ: ಪಟ್ಟಣಕ್ಕೆ ಚೆನ್ನಮ್ಮ ಹಾಗೂ ಅಬ್ಬಕ್ಕ ರಥಯಾತ್ರೆ ಆಗಮನ,ಹಿಂದೂಪರ ಸಂಘಟನೆ ಹಾಗೂ ಪಟ್ಟಣದ ಮುಖಂಡರಿಂದ ಅದ್ದೂರಿ ಸ್ವಾಗತ
ಹುಣಸಗಿ ಪಟ್ಟಣಕ್ಕೆ ಚೆನ್ನಮ್ಮ ಹಾಗೂ ಅಬ್ಬಕ್ಕ ರಥಯಾತ್ರೆ ಆಗಮನ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣಕ್ಕೆ ರವಿವಾರದಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಚೆನ್ನಮ್ಮ-ಅಬ್ಬಕ್ಕ ರಥಯಾತ್ರೆ ಆಗಮಿಸಿದ್ದು ಹಿಂದೂ ಪರ ಸಂಘಟನೆಯ ಹಾಗೂ ಪಟ್ಟಣದ ಮುಖಂಡರು ಪಟ್ಟಣಕ್ಕೆ ಅದ್ದೂರಿಯಾಗಿ ರಥಯಾತ್ರೆ ಸ್ವಾಗತಿಸಿದರು. ಪಟ್ಟಣದ ಬಸವೇಶ್ವರ ವೃತ್ತ ಹಾಗೂ ಚೆನ್ನಮ್ಮ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು ಈ ಸಂದರ್ಭದಲ್ಲಿ ಪಟ್ಟಣದ ಅನೇಕ ಜನ ಮುಖಂಡರು ಭಾಗವಹಿಸಿದ್ದರು