ಯಳಂದೂರು: ಯಳಂದೂರಿನ ಎಳೆಪಿಳ್ಳಾರಿ ಬಳಿ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ-ಇಬ್ಬರು ಯುವಕರು ದುರ್ಮರಣ
ಕೊಳ್ಳೇಗಾಲ-ಯಳಂದೂರು ರಸ್ತೆಯ ಎಳೆಪಿಳ್ಳಾರಿ ಬಳಿ ಬುಧವಾರ ಬೆಳಿಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಬ್ಬು ತುಂಬಿಸಿಕೊಂಡು ನಿಂತಿದ್ದ ಲಾರಿಗೆ, ಉಮ್ಮತ್ತೂರು ಕಡೆಯಿಂದ ಬರುತ್ತಿದ್ದ ಟೊಮೇಟೊ ಸಾಗಾಟ ಮಾಡುತ್ತಿದ್ದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ, ಆಟೋದಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಉಮ್ಮತ್ತೂರು ಗ್ರಾಮದ ನಿವಾಸಿಗಳಾದ 22 ವರ್ಷದ ಸುಮಂತ್ ಮತ್ತು 16 ವರ್ಷದ ನಿತಿನ್ ಕುಮಾರ್ ಎಂಬುವವರಾಗಿದ್ದಾರೆ.ಎಳೆಪಿಳ್ಳಾರಿ ಸಮೀಪದ ಜಮೀನಿನಿಂದ ಕಬ್ಬು ತುಂಬಿಸಿಕೊಂಡ ಲಾರಿ ಕಾರ್ಖಾನೆಗೆ ತೆರಳಲು ರಸ್ತೆಯ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಗೂಡ್ಸ್ ಅಟೋ ಹಿಂಬದಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ