ಬಂಗಾರಪೇಟೆ: ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದೇ ನಮ್ಮ ಮೂಲ ಉದ್ದೇಶ ಕದರೇನಹಳ್ಳಿಯಲ್ಲಿ ಮಿಸ್ಟರ್ ಕೂಪರ್ ಕಂಪನಿಯ ಉಪಾಧ್ಯಕ್ಷ ಗೌತಮ್ ಶರ್ಮ
ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದೇ ನಮ್ಮ ಮೂಲ ಉದ್ದೇಶ ಯಾರು ಸಹ ಗುಡಿಸಿಲಿನಲ್ಲಿ ವಾಸ ಮಾಡುವಂತಾಗಬಾರದು ಗುಡಿಸಲು ಮನೆ ಮುಕ್ತ ಮಾಡಲು ನಾವು ಪಣತೊಟ್ಟಿದ್ದೇವೆ ಎಂದು ಬೆಂಗಳೂರಿನ ಮಿಸ್ಟರ್ ಕೂಪರ್ ಕಂಪನಿಯ ಉಪಾಧ್ಯಕ್ಷ ಗೌತಮ್ ಶರ್ಮ ಹೇಳಿದರು.ಹೋಬಳಿಯ ಕೆ.ಕದರೆನಹಳ್ಳಿ ಗ್ರಾಮದ ರತ್ನಮ್ಮ ಬಿನ್ ಮಂಜುನಾಥ್, ಗರುಡಕೆಂಪನಹಳ್ಳಿ ಗ್ರಾಮದ ಚೈತ್ರ ಬಿನ್ ಚಂದ್ರಶೇಖರ್ ಹಾಗೂ ತಮಟೆಮಾಕನಹಳ್ಳಿ ಗ್ರಾಮದ ಸಂಧ್ಯಾ ಬಾಯಿ ಬಿನ್ ಮಂಜುನಾಥ್ ರಾವ್ ರವರಿಗೆ ಕಂಪನಿ ಸಹಯೋಗದೊಂದಿಗೆ ನಿರ್ಮಿಸಿ ಕೊಟ್ಟಿರುವ ನೂತನ ಮನೆಗಳನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಏಡ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ಇದುವರೆಗೂ ಕರ್ನಾಟಕದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದ್ರು