ನಾಗಮಂಗಲ: ನಾಗಮಂಗಲ ಪಟ್ಟಣದಲ್ಲಿ ಮಾಜಿ ಶಾಸಕರ ಘೋಷಣೆ, ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಮಲ್ಲೇನಹಳ್ಳಿ ಎಂ ಸಿ ಚೆನ್ನಪ್ಪ ಅವರ ಆಯ್ಕೆ
ನಾಗಮಂಗಲ : ತಾಲೂಕು ಜಾತ್ಯಾತೀತ ಜನತಾದಳ ಪಕ್ಷದ ನೂತನ ಅಧ್ಯಕ್ಷರಾಗಿ ಕೆ ಮಲ್ಲೇನ ಹಳ್ಳಿ ಗ್ರಾಮದ ಎಂ ಸಿ ಚನ್ನಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಘೋಷಣೆ ಮಾಡಿದ್ದಾರೆ ನಾಗಮಂಗಲ ಪಟ್ಟಣದಲ್ಲಿ ಸೋಮವಾರ ಸಾಯಂಕಾಲ 5.30 ರ ಸಮಯದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಈ ಘೋಷಣೆ ಮಾಡಿದ ಅವರು ಜೆಡಿಎಸ್ ಪಕ್ಷದ ನಿಷ್ಠಾ ವಂತ ಕಾರ್ಯಕರ್ತ ಎ.ಪಿ.ಎಂ.ಸಿ ನಿರ್ದೇಶಕರು ಮತ್ತು ಪುರಸಭೆ ಸದಸ್ಯರಾಗಿ ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಪಕ್ಷ ಸಂಘಟನೆಗಾಗಿ ದುಡಿದಿದ್ದು ಎಂ ಸಿ ಚನ್ನಪ್ಪ ನವರಿಗೆ ನಾಗಮಂಗಲ ತಾಲೂಕಿನ ಜೆಡಿಎಸ್ ಪಕ್ಷದ ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದೇನೆ ಎಂದರು.