ಹನೂರು: ಹೆಂಡತಿ ನಾಪತ್ತೆ – ಗಂಡನಿಂದ ಹನೂರು ಪೊಲೀಸ್ ಠಾಣೆಗೆ ದೂರು
ಹನೂರು : ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಗಂಡನೆ ಹನೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಸಂಗ ಜರುಗಿದೆ ಪಿಜಿಪಾಳ್ಯ ಗ್ರಾಮದ ರಾಜೇಶ್ ಎಂಬಾತ ತನ್ನ. ಪತ್ನಿ ನಂದಿನಿ ನಾಪತ್ತೆಯಾಗಿದ್ದಾರೆ ಎಂದು ದೂರುವನೀಡಿದ್ದಾರೆ ತಮಿಳುನಾಡಿನ ಸತ್ತಿ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ ಮಧನ್ ಮಗಳುಲಾದ ನಂದಿನಿಯನ್ನು ಈಗ 6 ವರ್ಷಗಲ್ಲಿ ಮದುವೆಯಾಗಿದ್ದು ನನ್ನ ಹೆಂಡ್ತಿ ನಂದಿನಿಯು ನನ್ನ ತಾಯಿ ತಮಿಳುನಾಡಿನಲ್ಲಿ ಹುಷಾರಿಲ್ಲ, ಎಂದು ನನಗೆ ಹೇಳಿ ಮನೆಯಿಂದ ಹೋದವಳು ವಾಪಾಸ್ಸು ಮನೆಗೆ ಬಂದಿರುವುದಿಲ್ಲ.. ಈ ವಿಚಾರವನ್ನು ನನ್ನ ಮಾವ ಮಧನ್ ಗೆ ಪೋನ್ ಮಾಡಿ ನನ್ನ ಹೆಂಡ್ತಿ, ನಿಮ್ಮ ಮನೆಗೆ ಬಂದಿದ್ದಾಳೆ ಅಂತ ವಿಚಾರಿಸಿದಾಗ ನಮ್ಮ ಮಾವ ನನ್ನ ಮನೆಗೆ ಬಂದಿಲ್ಲ ಆದ್ದರಿಂದ ಪತ್ತೆಮಾಡಿಕೊಡುವಂತೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ