ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನಿಡೆಕ್ ಎಂಬ ನೂತನ ಕೈಗಾರಿಕಾ ಕಂಪೆನಿ ಆರಂಭವಾಗಿದ್ದು, ಈ ಕಂಪೆನಿಗೆ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಚಾಲನೆ ನೀಡಿದರು. ನಿಡೆಕ್ ಕಾರ್ಪೋರೇಷನ್ ಒಂದು ಜಪಾನ್ ಮೂಲದ ಬಹುರಾಷ್ಟ್ರೀಯ ಕಂಪೆನಿಯಾಗಿದ್ದು, ವಿದ್ಯುತ್ ಮೋಟರ್ಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ವಿಶ್ವದ ಅಗ್ರಗಣ್ಯ ಸ್ಥಾನದಲ್ಲಿದೆ. ಮೇಕ್ ಇನ್ ಇಂಡಿಯಾ