ಶಿರಹಟ್ಟಿ: ಪಟ್ಟಣದಲ್ಲಿ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ
ಶಿರಹಟ್ಟಿ ಪಟ್ಟಣದ ಶಬ್ಬೀರ ಕಾಲೋನಿಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಶಿರಹಟ್ಟಿ ತಾಲೂಕಾ ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸೋಮವಾರ ಮಧ್ಯಾನ್ಹ ೦೧ ಗಂಟೆಗೆ ಜರುಗಿತು. ಶಾಸಕರುಗಳಾದ ಎಸ್.ವ್ಹಿ ಸಂಕನೂರು ಹಾಗೂ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿಯವರ ನೇತೃತ್ವದಲ್ಲಿ ನಡೆದ ಈ ಅಲ್ಪ ಸಂಖ್ಯಾತರ ಮೋರ್ಚಾ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಲ್ಪ ಸಂಖ್ಯಾತರ ಶಿರಹಟ್ಟಿ ಮಂಡಳದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದರು.