ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಬಿಸಿಎಂ ಮಹಿಳಾ ವಸತಿ ನಿಲಯಕ್ಕೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಭಾನುವಾರ ಭೇಟಿ ನೀಡಿ ಹಾಸ್ಟೆಲ್ನ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಹಾಸ್ಟೆಲ್ನ ಆಹಾರದ ಗುಣಮಟ್ಟ ಮತ್ತು ಹಾಜರಾತಿ ದಾಖಲೆ ಕುರಿತು ಬಂದಿದ್ದ ದೂರುಗಳ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಹಾಜರಾತಿ ಸರಿಯಾಗಿ ದಾಖಲು ಮಾಡದಿರುವುದು ತಿಳಿದು ಬಂದ ಹಿನ್ನೆಲೆ ಅವರ ವಿರುದ್ಧ ಶಾಸಕರು ಗರಂ ಆಗಿದ್ದಾರೆ.