ಬೆಂಗಳೂರು ಉತ್ತರ: IPL ಟಿಕೆಟ್ ಬ್ಲಾಕ್ ನಲ್ಲಿ ಸೇಲ್, ಸಿಸಿಬಿ ಪೊಲೀಸರಿಂದ ಆರೋಪಿಗಳು ಅರೆಸ್ಟ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೀತಿವೆ. ಇದೇ ವೇಳೆ ಕೆಲವರು ಬಂಡವಾಳ ಮಾಡಿಕೊಂಡು ಟಿಕೆಟ್ ಗಳನ್ನ ದುಪ್ಪಟ್ಟು ಬೆಲೆಗೆ ಮಾರ್ತಿದ್ದಾರೆ. ಅಂತೋರ ಮೇಲೆ ಕಣ್ಣಿಟ್ಟಿರುವ ಸಿಸಿಬಿ ಪೊಲೀಸ್ರು ಅಂತೋರನ್ನ ಬಂಧಿಸ್ತಿದೆ. ಇಂದು ಅಂದರೆ ಮೇ 3ನೇ ತಾರೀಖು ಆರ್ ಸಿಬಿ VS ಚೆನ್ನೈ ಮ್ಯಾಚ್ ಹಿನ್ನೆಲೆ ಬ್ಲಾಕ್ ನಲ್ಲಿ ಐಪಿಎಲ್ ಟಿಕೆಟ್ ಮಾರುತ್ತಿದ್ದವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚರಣ್ ರಾಜ್, ಹರ್ಷವರ್ಧನ್, ವಿನಯ್, ವೆಂಕಟಸಾಯಿ ಬಂಧಿತರು. ಸಂಜೆ 6ಗಂಟೆ ಸುಮಾರಿಗೆ ಯಶವಂತಪುರ ಬಳಿಯ ಪೈಪ್ ಲೈನ್ ರಸ್ತೆಯಲ್ಲಿ ಮಾರಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿದಾಳಿ ನಡೆಸಿದ್ದ ಸಿಸಿಬಿ 38 ಸಾವಿರ ಬೆಲೆ ಬಾಳುವ 32 ಟಿಕೇಟ್ ವಶಪಡೆಯಲಾಗಿದೆ.