ಕೃಷ್ಣರಾಜಪೇಟೆ: ಐಕನಹಳ್ಳಿ ಕೊಪ್ಪಲು ಗ್ರಾಮದ ಡೇರಿ ಅಧ್ಯಕ್ಷರ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ
ಕೆ. ಆರ್. ಪೇಟೆ ತಾಲೂಕಿನ ಐಕನಹಳ್ಳಿ ಕೊಪ್ಪಲು ಗ್ರಾಮದ ಡೈರಿ ಅಧ್ಯಕ್ಷರ ಮನೆ ಮುಂದೆ ಹಾಲು ಸುರಿದು ಪ್ರತಿಭಟನೆ ನಡೆಸಿದ ಘಟನೆ ಜರುಗಿತು. ಕೆಆರ್ ಪೇಟೆ ತಾಲೂಕಿನ ಐಕನಹಳ್ಳಿ ಕೊಪ್ಪಲು ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಯಶೋಧ ಅವರು ಲಕ್ಷಾಂತರ ರೂಪಾಯಿಗಳ ಹಗರಣ ಮಾಡಿದ್ದಾರೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ತನಿಖೆ ನಡೆಸದೆ, ಅಧ್ಯಕ್ಷರು ಕಾರ್ಯದರ್ಶಿಯಿಂದ ರಾಜೀನಾಮೆ ಪಡೆದು ಸಂಘಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸದಸ್ಯರು ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಮನೆ ಮುಂದೆ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಹಾಲು ಸುರಿದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿ