ಚಿಟಗುಪ್ಪ: ನೀಡಿದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿ ಟಾಪರ್ ಆಗಬೇಕು ಅನ್ನೋದು ನನ್ನ ಅಪೇಕ್ಷೆ : ಪಟ್ಟಣದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್
ನೀಡಿದ ಜವಾಬ್ದಾರಿಯನ್ನ ಚೆನ್ನಾಗಿ ನಿಭಾಯಿಸಿದರೆ ಅಂಕ ಕೂಡ ಚೆನ್ನಾಗಿ ಬಂದು ತೇರ್ಗಡೆ ಆಗಬಹುದು. ಕೆಲಸ ಚೆನ್ನಾಗಿ ಮಾಡದೇ ಇದ್ರೆ ಕಡಿಮೆ ಮಾರ್ಕ್ಸ್ ಕೊಟ್ಟು ಫೇಲ್ ಮಾಡ್ತಾರೆ. ಆದರೆ ನನಗೆ ಬರೀ ಪಾಸಾಗೋದಿಲ್ಲ ಇನ್ನು ಹೆಚ್ಚಿನ ಸೇವೆಯನ್ನು ಸಲ್ಲಿಸಿ ಟಾಪರ್ ಆಗ್ಬೇಕು ಅನ್ನೋದು ನನ್ನ ಅಪೇಕ್ಷೆ ಅಂತ ಶಾಸಕ ಡಾ. ಸಿದ್ದು ಪಾಟೀಲ್ ಮನದಾಳದ ಮಾತನ್ನು ಬಿಚ್ಚಿಟ್ಟರು. ಪಟ್ಟಣದಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿದ ಬಳಿಕ ಶುಕ್ರವಾರ ರಾತ್ರಿ 7:30ಕ್ಕೆ ಎರಡುವರೆ ವರ್ಷ ಪೂರ್ಣ ಗೊಳಿಸಿದ್ದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಸಿದರು.