ಚನ್ನಪಟ್ಟಣ: ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ:
ವಂದಾರಗುಪ್ಪೆ ವಿ.ಎಸ್.ಎಸ್.ಎನ್ ಅಧ್ಯಕ್ಷ ವಿ.ಬಿ.ಚಂದ್ರಯ್ಯ ಹೇಳಿಕೆ.
ಚನ್ನಪಟ್ಟಣ - ತಾಲ್ಲೂಕಿನ ವಂದಾರಗುಪ್ಪೆಯ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಬಿ. ಚಂದ್ರಯ್ಯ, ಉಪಾಧ್ಯಕ್ಷರಾಗಿ ಪೌಳಿದೊಡ್ಡಿ ರಾಜೇಶ್ ಅವಿರೋಧ ಆಯ್ಕೆಯಾದರು. ಬುಧವಾರ ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾಗಿರುವ ವಂದಾರಗುಪ್ಪೆ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿ.ಬಿ. ಚಂದ್ರಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೌಳಿದೊಡ್ಡಿ ರಾಜೇಶ್ಅವರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರು