ಚಡಚಣ: ಬ್ಯಾಂಕ್ ದರೋಡೆ ಕಳ್ಳರನ್ನು ನೂರಕ್ಕೆ ನೂರರಷ್ಟು ಹಿಡಿಯುತ್ತೇವೆ, ಪಟ್ಟಣದಲ್ಲಿ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಹೇಳಿಕೆ
ನೂರಕ್ಕೆ ನೂರರಷ್ಟು ನಾವು ಕಳ್ಳರನ್ನು ಹಿಡಿಯುತ್ತೇವೆ. ನಮ್ಮೇಲೆ ವಿಶ್ವಾಸ ಇರಲಿ ಎಂದು ವಿಜಯಪುರ ಹೆಚ್ಚುವರಿ ಪೊಲೀಸ ಅಧೀಕ್ಷರಾದ ರಾಮನಗೌಡ ಹಟ್ಟಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲ 4ಗಂಟೆ ಸುಮಾರಿಗೆ ಎಸ್ಬಿಐ ಶಾಖೆಯ ನೇತೃತ್ವದಲ್ಲಿ ಗ್ರಾಹಕರ ತುರ್ತು ಸಭೆಯಲ್ಲಿ ಮಾತನಾಡಿದರು. ಇನ್ನು ಗ್ರಾಹಕರು ಪದೇ ಪದೇ ಎಸ್ಬಿಐ ಬ್ಯಾಂಕ್ಗೆ ಹೋಗಿ ಸಿಬ್ಬಂದಿಗಳಿಗೆ ತೊಂದರೆ ನೀಡಬೇಡಿ. ಇದೀಗ್ ನಾವು ಕಳ್ಳರನ್ನು ಹಿಡಿಯಲು ಟೀಂ ರಚನೆ ಮಾಡಿದ್ದೇವೆ. ಕಳ್ಳರನ್ನು ಹಿಡಿಯುವ ಜವಾಬ್ದಾರಿ ನಮ್ದು ಇದೆ. ಅದಕ್ಕಾಗಿ ನಿಮ್ಮ ಹಣ, ಚಿನ್ನವನ್ನು ನೂರಕ್ಕೆ ನೂರರಷ್ಟು ಮರಳಿ ತರುತ್ತೇವೆ ಎಂದು ಎಸ್ಬಿಐ ಗ್ರಾಹಕರಿಗೆ ಭರವಸೆ ನೀಡಿದರು. ಈ ವೇಳೆ ಗ್ರಾಹಕರು ತಮ್ಮ ಅಳಲನ್ನು ಪೊಲೀಸರ ಎದುರು ಹೇಳಿಕೊಂಡರು.