ಮಸ್ಕಿ ತಾಲೂಕಿನ ಸರ್ವೆ ನಂಬರ್ 236 ರಲ್ಲಿ ಕಳೆದ 20 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಬಸನಗೌಡ ತುರುವಿಹಾಳ ಅವರು ಮತ ಹಾಕಿಸಿಕೊಂಡು, ಶಾಸಕರಾದ ನಂತರ, ಇದೀಗ ಆ ಒಂದು ಸ್ಥಳದಲ್ಲಿ ಇರುವಂತಹ ಜನರನ್ನ ಖಾಲಿ ಮಾಡಿಸಲು ಮುಂದಾಗಿದ್ದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಇಂದು ತುರವಿಹಾಳ ಗ್ರಾಮದ ಮಹಿಳೆಯರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದಾಗ ಮಹಿಳೆ ಅಸಮಾಧಾನ ಹೊರಹಾಕಿದ್ದು ಹೀಗೆ..