ನಮ್ ಸಮಾಜ ಯಾವತ್ತು ಯಾರಿಗೂ ದ್ರೋಹ ಮಾಡಿಲ್ಲ ಮಾಡುವುದು ಇಲ್ಲ ಆದರೆ ಈ ಕಾರ್ಯಕ್ರಮ ಪ್ರಶ್ನೆ ಬಂದಾಗ ಮಾತ್ರ ನಮ್ಮಿಂದ ಯಾಕೆ ದ್ರೋಹ ಮಾಡಿಸ್ತಾ ಇದ್ದೀರಾ ಅನ್ನೋದಕ್ಕೆ ಸಂಬಂಧಿತರು ಉತ್ತರ ಕೊಡಬೇಕು ಅಂತ ಕನಕದಾಸ ಜಯಂತಿ ಆಚರಣೆ ಸಮಿತಿ ಪ್ರಮುಖ ಶಿವರಾಜ ಚೀನಕೇರಿ ಕೇಳಿದರು. ನಗರದಲ್ಲಿ ಭಾನುವಾರ ಸಂಜೆ 4:30ಕ್ಕೆ ನಡೆದ ದಾಸ ಶ್ರೇಷ್ಠ ಕನಕದಾಸ ಜಯಂತಿಯಲ್ಲಿ ಪ್ರಾಸ್ತಾವಿಕ ಮಾತನಾಡಿ ಕೂಡಿಸುವವರು ಭೇದಿಸುವಾಗ ಸಮಾಜ ಒಗ್ಗೂಡಲು ಹೇಗೆ ಸಾಧ್ಯ ಎಂದರು.