ಕಲಬುರಗಿ: ನಗರದಲ್ಲಿ ರೈತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ: ಏನಂದ್ರು ಗೋತ್ತಾ ಎಚ್‌ಡಿಕೆ?
ಕಲಬುರಗಿ : ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಕಂಗೆಟ್ಟಿರೋ ಅನ್ನದಾತರೊಂದಿಗೆ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್‌ಡಿಕೆ ಕುಮಾರಸ್ವಾಮಿ ಕಲಬುರಗಿ ರೈತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆತ್ಮಸ್ಥರ್ಯ ತುಂಬಿದ್ದಾರೆ.. ಸೆ15 ರಂದು ಮಧ್ಯಾನ 1 ಗಂಟೆಗೆ ಎಪಿಎಂಸಿಯಲ್ಲಿ ರೈತರೊಂದಿಗೆ ಜೆಡಿಎಸ್ ಯುವ ಘಟಕದ ರಾಜ್ಯಾದ್ಯಕ್ಷ ನಿಖಿಲ ಕುಮಾರಸ್ವಾಮಿ ಸಂವಾದ ನಡೆಸ್ತಿರೋ ವೇಳೆ ಎಚ್‌ಡಿಕೆ ನಿಖಿಲ್‌ಗೆ ಕಾಲ್ ಮಾಡಿದ್ದು, ಈ ವೇಳೆ ಮೈಕ್ ಮುಂದೆ ಮೊಬೈಲ್ ಹಿಡಿದ ವೇಳೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಇನ್ನೂ ಕೇಂದ್ರದಿಂದ ರೈತರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಕೊಡಿಸೋದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.