ಭಾಲ್ಕಿ: ಪಟ್ಟಣದ ಬಸ್ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಅರುಣಕುಮಾರ ಪಾಟೀಲ ಭೇಟಿ; ಪರಿಶೀಲನೆ
Bhalki, Bidar | Nov 3, 2025 " ಜನರ ಊರಿಗೆ ಸುಗಮ ಸಾರಿಗೆ " ರಾಜ್ಯ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕೆಕೆಆರ್ಟಿಸಿ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದಿದ್ದಕ್ಕಾಗಿ ಹತ್ತು ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಪಡೆದಿದೆ. ಇದರ ಹೊರತಾಗಿಯೂ ನಾವು ಇನ್ನೂ ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದುವುದಕ್ಕಾಗಿ ಬೇಕಾದ ಸುಧಾರಣೆಗಳನ್ನು ತರಲು ನಮ್ಮ ಸರ್ಕಾರ ಸಿದ್ಧವಿದೆ. ನಮ್ಮ ಜನಪರ ಆಲೋಚನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಸ್ ಘಟಕ ಹಾಗೂ ಕೇಂದ್ರ ಬಸ್ ನಿಲ್ದಾಣ ವಿಕ್ಷಣೆ ಮಾಡಿದ್ದೇನೆ. ಒಳ್ಳೆಯ ರೀತಿಯ ಸ್ವಚ್ಚತೆ ಮತ್ತು ಒಗ್ಗಟ್ಟಿನ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತದು ಅದರಂತೆ ನಮ್ಮ ಮಾರ್ಗದರ್ಶಕರು ಶತಾಯುಷಿಗಳಾದ ಸನ್ಮಾನ್