ಮಳವಳ್ಳಿ: ಟಿ.ಕಾಗೇಪುರದಲ್ಲಿ ಅಪ್ರಾಪ್ತ ಬಾಲಕಿ
ನಾಪತ್ತೆ, ದೂರು ದಾಖಲು
ಅಪ್ರಾಪ್ತ ಬಾಲಕಿಯೊಬ್ಬಳು ಭಾಷೆಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಈ ಕುರಿತು ಅಜ್ಜಿ ಮಳವಳ್ಳಿ ತಾಲ್ಲೂಕಿನ ಸಿಳ್ಳೇಕ್ಯಾತ ಜನಾಂಗದ ಸಾಕಮ್ಮ ದೂರು ನೀಡಿದ್ದಾರೆ. 16 ವರ್ಷ 7 ತಿಂಗಳ ವಯೋಮಾನದ ಬಾಲಕಿ ಮನೆಯಿಂದ ಹೊರ ಹೋದವರು ಮತ್ತೆ ವಾಪಾಸ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಸಂಬಂಧಿಕರ ಮನೆಗೆ ಹೋಗಿರಬಹುದೆಂಬ ಹುಡುಕಾಟ ನಡೆಸಿದರೂ ವಾಪಾಸ್ ಬಾರದ ಕಾರಣ ದೂರು ದಾಖಲಿಸಲಾಗಿದೆ. ಘಟನೆ ಕುರಿತು ಮಳವಳ್ಳಿ ಗ್ರಾಮಾಂತೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಸ್ಪಿ ಕಚೇರಿ ಮಾಹಿತಿ ನೀಡಿದೆ.