ಮಳವಳ್ಳಿ: ನೂತನವಾಗಿ ನಿರ್ಮಾಣಗೊಳ್ಳುತ್ತಿ ರುವ ಪಂಚಮಿ ಕ್ಷೇತ್ರ ಪೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ, ಪಟ್ಟಣದಲ್ಲಿ ಡಾ ಪುಟ್ಟಸ್ವಾಮಿ ಮಾಹಿತಿ
ಮಳವಳ್ಳಿ : ಅತ್ತ ದೇವಾಲಯ, ಇತ್ತ ಪ್ರಾಕೃತಿಕ ಚಿಕಿತ್ಸಾಲಯ, ಒಂದೆಡೆ ವಿದ್ಯಾಲಯ, ಇನ್ನೊಂದೆಡೆ ಯೋಗಾಲಯ, ಜೊತೆಗೆ ವೃದ್ದಾ ಲಯ ಹೀಗೆ ಐದು ಆಲಯಗಳನ್ನು ಒಳಗೊಂಡ ಪಂಚಮಿ ಕ್ಷೇತ್ರ ವೊಂದು ಮಳವಳ್ಳಿ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಲೋಕಾ ರ್ಪಣೆಗೆ ಸಿದ್ದವಾಗುತ್ತಿದೆ. ನಾಡಿನ ಖ್ಯಾತ ಯೋಗಾಚಾ ರ್ಯರು, ಪ್ರಕೃತಿ ಚಿಕಿತ್ಸಕರು, ಭದ್ರ ಕಾಳಿಯ ಆರಾಧಕರು ಆದ ಡಾ. ಪುಟ್ಟಸ್ವಾಮಿ ಅವರು ಈ ಪಂಚಮಿ ಕ್ಷೇತ್ರದ ರುವಾರಿಗಳು ನಿರ್ಮಾತೃ ಗಳು ಆಗಿದ್ದು ಇವರ ಯೋಜನೆ, ಆಲೋಚನೆ, ಚಿಂತನೆಯಂತೆ ಸುಂದರ ಪ್ರಾಕೃತಿಕ ತಾಣವಾಗಿ ರುವ ಪಟ್ಟಣದ ಕನಕಪುರ ರಸ್ತೆಯ ಲ್ಲಿನ ಅತ್ಯಂತ ಪುರಾತನ ಹಾಗೂ ಇತಿಹಾಸ ಪ್ರಸಿದ್ಧವಾದ ಶ್ರೀ ಬೀರೇಶ್ವರ ದೇವಾಲಯದ ಪಕ್ಕದಲ್ಲೇ ಈ ಪಂಚಮಿ ಕ್ಷೇತ್ರ ನಿರ್ಮಾಣ ಗೊಳ್ಳುತ್ತಿದೆ.