ಮುಧೋಳ: ಮೀಸಲಾತಿ ಭೂತ ಸರಿಪಡಿಸುವ ಕೆಲಸ ಮಾಡಿ, ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ಮನವಿ ಮಾಡಿದ ಬಿಜೆಪಿ ಮುಖಂಡ ರಾಜುಗೌಡ
ರಾಜಕೀಯ ಚಟಕ್ಕೆ, ಭಾಷಣದ ಚಟಕ್ಕೆ ಮೀಸಲಾತಿ ಘೋಷಣೆ ಮಾಡಬಾರದು.ಸ್ವಪಕ್ಷದ ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಸಚಿವ. ಸತೀಶಣ್ಣ (ಜಾರಕಿಹೊಳಿ) ದಯವಿಟ್ಟು ಮೀಸಲಾತಿ ಭೂತ ಸರಿಪಡಿಸುವ ಕೆಲಸ ಮಾಡ್ರಿ.ಮುಧೋಳ ನಗರದಲ್ಲಿ ಮಾಜಿ ಸಚಿವ ರಾಜುಗೌಡ ನಾಯಕ ಹೇಳಿಕೆ.ಅವರಿಗೆ ಮೀಸಲಾತಿ ಕೊಡಬೇಡಿ ಇವರಿಗೆ ಮೀಸಲಾತಿ ಕೊಡಬೇಡಿ ಅಂತ ಸಮಾಜದ ಗುರುಗಳು, ಸ್ವಾಮೀಜಿಗಳು ಹೇಳಬಹುದು.. ನಾವು ರಾಜಕಾರಣಿಗಳು ಹೇಳಲು ಆಗಲ್ಲ.ಯಾರಿಗೆ ಅರ್ಹತೆ ಇದೆ ಅವರಿಗೆ ಕೊಡಬೇಡಿ ಅಂತ ಹೇಳುವ ಹಕ್ಕು ನಮಗೆ ಇಲ್ಲ.ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ನೌಕರಿ ಸಿಗಲಿ ಅಂತ ಮೀಸಲಾತಿ ಕೊಡ್ತೇವೆ.ಆದ್ರೆ ಈ ದಿನಗಳಲ್ಲಿ ಏನಾಗ್ತಿದೆ. ನಾವು ಹೋದ ಬಾರಿ (ಬಿಜೆಪಿ ಅಧಿಕಾರದಲ್ಲಿ) ನಾವೊಂದು ತಪ್ಪು ಮಾಡಿದ್ವಿ ಎಂದರು.