ಶಿವಶರಣರು ಹಾಗೂ ವಚನಕಾರರದ ಮಾದರ ಚೆನ್ನಯ್ಯ ಜಯಂತೋತ್ಸವ ಕಾರ್ಯಕ್ರಮ ಡಿಸೆಂಬರ್ 4ರಂದು ನಗರದಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದು ಮಾದಾರ ಚೆನ್ನಯ್ಯ ಸೇವಾ ಸಮಿತಿ ಮುಖಂಡರು ತಿಳಿಸಿದರು. ಸೋಮವಾರ 10 ಗಂಟೆಗೆ ಅಂಬಣ್ಣ ಅರೋಲಿ ಅವರು ಮಾತನಾಡುತ್ತಾ, ಶ್ರೀ ಮಾದಾರ ಚೆನ್ನಯ್ಯ ಅವರು ಶ್ರೀ ಬಸವಣ್ಣ ಅವರಿಗಿಂದ ಮುಂಚಿತ ಕಾಲದಿಂದ ವಚನ ಚಳುವಳಿಗೆ ನೇತೃತ್ವ ವಹಿಸಿದ್ದರು ಎಂದರು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಾದಾರ ಚೆನ್ನಯ್ಯ ಜಯಂತೋತ್ಸವ ಅತ್ಯಂತ ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದರು.