ಕೆರೆಗೆ ನೀರು ತುಂಬಿಸಲು ಜಿಲ್ಲಾಡಳಿತ ವಿಫಲ ಆಗಿರುವುದನ್ನು ಖಂಡಿಸಿ ರೈತ ಮುಖಂಡ ನಾಗಾರ್ಜುನ ನೇತೃತ್ವದಲ್ಲಿ ಚಾಮರಾಜನಗರದ ತಾಲೂಕಿನ ತಮ್ಮಡಹಳ್ಳಿ ಪಂಪ್ ಹೌಸ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿಯು ಎರಡನೆ ದಿನವಾದ ಬುಧವಾರವೂ ನಡೆಸಿದರು. ರೈತ ಮುಖಂಡ ನಾಗಾರ್ಜುನ್ ಮಾತನಾಡಿ, ತಮ್ಮಡಹಳ್ಳಿ ಕೆರೆಯಿಂದಯಿಂದ ಹುತ್ತೂರು ಕೆರೆಗೆ ನೀರು ಹರಿಸಲು 3ಮೋಟಾರ್ ಗಳಲ್ಲಿ ಎರಡು ರಿಪೇರಿ ಇದ್ದು 3 ರಲ್ಲಿ ಎರಡು ಮೋಟಾರ್ ಚಾಲನೆ ಆದರೆ ಮಾತ್ರ ಹುತ್ತೂರಿಗೆ ವೇಗವಾಗಿ ನೀರು ಬರಲಿದೆ, ತ್ವರಿತವಾಗಿ ದುರಸ್ಥಿಗೊಳಿಸಬೇಕು. ಗುರುವಾರದಿಂದ ಗುಂಡ್ಲುಪೇಟೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದರು.