ಹಳಿಯಾಳ: ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಏರಿಕೆ ಶಿವಾಜಿ ವೃತ್ತದ ಬಳಿ ರೈತರಿಂದ ಪ್ರತಿಭಟನೆ
ಕಬ್ಬು ಕಟಾವು, ಸಾಗಾಣಿಕೆಗೆ ಬೆಲೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಹಳಿಯಾಳದ ಶಿವಾಜಿ ಮಹಾರಾಜರ ವೃತ್ತದ ಬಳಿ ತಾಲೂಕಿನ ರೈತರು ಗುರುವಾರ ಸಂಜೆ 4ರವರೆಗೆ ಪ್ರತಿಭಟನೆ ನಡೆಸಿದ್ದಾರೆ. ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ತರಾತುರಿಯಲ್ಲಿ ಸರಕಾರದ ಆದೇಶ ಬಂದಿದ್ದರಿಂದ ಕಾರ್ಖಾನೆಯವರು ದರ ನಿಗದಿ ರೈತರೊಂದಿಗೆ ಸಭೆ ನಡೆಸದೇ ಹಾಗೂ ದ್ವಿಪಕ್ಷ ಒಪ್ಪಂದ ಮಾಡಿಕೊಳ್ಳದೇ ಕಬ್ಬು ಕಟಾವು ಮತ್ತು ಸಾಗಾಣಿಕೆ ದರದಲ್ಲಿ ದರ ಹೆಚ್ಚಿಸಿ ಕಬ್ಬಿನ ದರವನ್ನು 3050 ರೂ. ಪ್ರತಿ ಟಟ್ ಗೆ ಘೋಷಣೆ ಮಾಡಿರುವುದುನ್ನು ರೈತರು ಆಕ್ಷೇಪಿಸಿದ್ದಾರೆ. ರೈತರ ಬೇಡಿಕೆಗಳನ್ನಯ ಪೂರೈಸಬೇಕು ಎಂದು ಒತ್ತಾಯ ಮಾಡಿದ್ದಾರೆ.