ಚಾಮರಾಜನಗರ: ಚಾಮರಾಜನಗರ ಬಂದ್ ಹಿನ್ನೆಲೆ ಬಸ್ ತಡೆದು ಪ್ರಯಾಣಿಕರನ್ನು ದಾರಿ ಮಧ್ಯೆ ಇಳಿಸಿದ ಪ್ರತಿಭಟನಾಕಾರರು
ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಕೆಎಸ್ಆರ್ ಟಿಸಿ ಬಸ್ ಅನ್ನು ತಡೆದು ದಾರಿ ಮಧ್ಯೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ ಘಟನೆ ನಡೆಯಿತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿಯಿಂದ ಬಂದ್ ಗೆ ಕರೆ ನೀಡಿತು. ಈ ವೇಳೆ ಕೆಲ ಬಸ್ ಗಳು ಸಂಚಾರ ಮಾಡುವ ವೇಳೆ ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಹೋಗುತ್ತಿದ್ದ ಬಸ್ ಅನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಡೆ ಇಳಿಸಿ ಮತ್ತೇ ಬಸ್ ಅನ್ನು ನಿಲ್ದಾಣಕ್ಕೆ ವಾಪಾಸ್ ಕಳುಹಿಸಿದರು.