ಹಾಸನ: ನಗರದಲ್ಲಿ ಕ್ರೇನ್ ನಿಂದಾ ಕೆಳಗೆ ಇಳಿಸುವಾಗ ನೆಲಕ್ಕೆ ಬಿದ್ದು ಪೆಂಡಾಲ್ ಗಣಪತಿ ಮೂರ್ತಿ ಪುಡಿ - ಪುಡಿ
Hassan, Hassan | Sep 21, 2025 ಹಾಸನ: ಗಣಪತಿ ವಿಸರ್ಜನೆ ವೇಳೆ ತೆಪ್ಪದಲ್ಲಿ ಕೂರಿಸುವ ಕ್ರೇನ್ ನಿಂದ ಗಣೇಶನ ಮೂರ್ತಿಯನ್ನು ಕೆಳಗಿಳಿಸುವಾಗ ಕೆಳಗೆ ಬಿದ್ದು ವಿಘ್ನ ವಿನಾಯಕನ ಮೂರ್ತಿ ಪುಡಿಪುಡಿಯಾಗಿರುವ ಘಟನೆ ಹಾಸನದಲ್ಲಿ ಶನಿವಾರ ರಾತ್ರಿ ನಡೆದಿದೆ. ಹಾಸನದ ಗಣಪತಿ ಪೆಂಡಾಲ್ ನಲ್ಲಿ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ 71ನೇ ವರ್ಷದ ಉತ್ಸವದ ಬಳಿಕ ಶನಿವಾರ ಬೆಳಗ್ಗೆ ವಿಸರ್ಜನಾ ಮೆರವಣಿಗೆಗೆ ಎಂಪಿ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ ಪ್ರಕಾಶ್, ಮಹಾನಗರ ಪಾಲಿಕೆಯ ಮೇಯರ್ ಗಿರೀಶ್ ಚನ್ನವಿರಪ್ಪ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಹಾಸನ ನಗರದಾದ್ಯಂತ ವಿವಿಧ ಕಲಾತಂಡಗಳೊಂದಿಗೆ ಸಂಚಾರ ಮಾಡಿದ್ದ ಮೆರವಣಿಗೆ ರಾತ್ರಿ ಸುಮಾರು 9:30 ಗಂಟೆಗೆ.ಕೆರೆ ಬಳಿ ತಲುಪಿ ವಿಸರ್ಜನೆಗೆ ಸಿದ್ಧವಾಗುತ್ತಿರುವಾಗಲೇ ಈ ಅವಘಡ ನದಿದೆ.