ಚಳ್ಳಕೆರೆ: ನೇರಲಗುಂಟೆ ಬಳಿ ಚಿರತೆ ದಾಳಿಗೆ ಹಸು ಸಾವು, ಸ್ಥಳೀಯರಲ್ಲಿ ಆತಂಕ
ನೇರಲಗುಂಟೆ ಗ್ರಾಮದ ಬಳಿ ಹಾಡುಹಗಲೇ ಚಿರತೆ ದಾಳಿಗೆ ಮಾಡಿದ್ದು ಹಸು ಮೃತಪಟ್ಟಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆ ಘಟನೆ ಬೆಳಕಿಗೆ ಬಂದಿದ್ದು ಹಿರೇಮಾಚಯ್ಯನಹಟ್ಟಿ ಗ್ರಾಮದ ನಾಗೇಂದ್ರಪ್ಪ ಎಂಬುವವರಿಗೆ ಸೇರಿದ ಹಸು ಎಂದು ತಿಳಿದು ಬಂದಿದೆ. ಇನ್ನೂ ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಸಮೀಪವಿರುವ ಡಿಆರ್ ಡಿ ಒ ಸಂಸ್ಥೆ ಗಡಿ ಭಾಗಕ್ಕೆ ಹೊಂದಿ ಕೊಂಡ ಯರಂಮಚಯ್ಯನಹಟ್ಟಿ ಸುತ್ತ ಮುತ್ತ ಕಳೆದ ಎರಡು ತಿಂಗಳಲ್ಲಿ ಸುಮಾರು ಬಾರಿ ಹಾಡು ಹಗಲೇ ಜಾನುವಾರುಗಳನ್ನ ಮೇಯಿಸುತ್ತಿರುವಾಗ ಚಿರತೆ ದಾಳಿ ಮಾಡಿದೆ