ಯೆಲಹಂಕ: ಚಿಕ್ಕಜಾಲದಲ್ಲಿ ಸ್ನೇಹಿತನಿಂದ ಸುಲಿಗೆ ಮಾಡಿದ್ದ ಫ್ರಂಡ್ಸ್ ಅರೆಸ್ಟ್; ಡಿಸಿಪಿ ಸಜೀತ್ ವಿ.ಜಿ
ಸ್ನೇಹಿತನಿಗೆ ಮುಹೂರ್ತವಿಟ್ಟು ಸುಲಿಗೆ ಮಾಡಿದ್ದ ಫ್ರೆಂಡ್ಸ್ ಅರೆಸ್ಟ್. ಬೆಂಗಳೂರು ಚಿಕ್ಕಜಾಲ ಪೊಲೀಸರಿಂದ ನಾಲ್ವರು ಆರೋಪಿಗಳು ಅರೆಸ್ಟ್ ಮಾಡಲಾಗಿದ್ದು, ಪವನ್,ಪ್ರೇಮ್ ಶೆಟ್ಟಿ,ತರುಣ್,ಅಚಲ್ ಬಂಧಿತರು. ಬಂಧಿತರೆಲ್ಲರೂ ಇಂಜಿನಿಯರಿಂಗ್, ಬಿಕಾಂ ಸ್ಟುಡೆಂಟ್ಸ್ ಗಳಾಗಿದ್ದು, ಕಳೆದ ಮೇ.1 ರಂದು, ಪ್ಲಾನ್ ಮಾಡಿ ಚಂದನ್ ಎಂಬಾತನ ಚಿನ್ನಾಭರಣ ಸುಲಿಗೆ ಮಾಡಿದ್ದ ಟೀಂ. ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್ ಬಳಿ ಸುಲಿಗೆ ಮಾಡಲಾಗಿತ್ತು. ಆರೋಪಿಗಳಾದ ಪವನ್, ಅಚಲ್ ಚಂದನ್ ನನ್ನ ಪಾರ್ಟಿಗೆ ಕರೆದೊಯ್ದಿದ್ದರು. ಕಂಠ ಪೂರ್ತಿ ಕುಡಿಸಿ ಕಾರಿನ ಬಳಿ ಕರೆತಂದಿದ್ದ ಆರೋಪಿಗಳು, ಈ ವೇಳೆ ಆರೋಪಿಗಳಾದ ಪ್ರೇಮ್ ಶೆಟ್ಟಿ,ತರುಣ್ ರಿಂದ ಸುಲಿಗೆ ಮಾಡಲಾಗಿದೆ. 59 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿದ್ದರು.