ಗುಂಡ್ಲುಪೇಟೆ: ಪಟ್ಟಣದ ಹೋಟೆಲ್ ನಲ್ಲಿ ಪರ್ಸ್ ಎಗರಿಸಿದ ಮಹಿಳೆ- ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪಟ್ಟಣದ ಬಸ್ ನಿಲ್ದಾಣದ ಹೊಟೇಲ್ ನಲ್ಲಿ ಮರೆತು ಬಿಟ್ಟು ಹೋಗಿದ್ದ ಪರ್ಸ್ ನ್ನು ಮಹಿಳೆಯೊಬ್ಬಾಕೆ ಎಗರಿಸರುವ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಮಹೇಶ್ ಎಂಬವರು ಪರ್ಸ್ ಕಳೆದುಕೊಂಡವರು. ಮಹೇಶ್ ತಮ್ಮ ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದು ಬಳಿಕ ಬಸ್ ನಿಲ್ದಾಣದ ಹೋಟೆಲ್ ನಲ್ಲಿ ಊಟ ಮಾಡಲು ಬಂದಿದ್ದಾರೆ. ಊಟ ಮಾಡಿದ ನಂತರ ಚೇರ್ ನಲ್ಲೇ ಪರ್ಸ್ ಬಿಟ್ಟು ಹೋಗಿ ಸ್ಕಾನ್ ಮೂಲಕ ಹಣ ಪಾವತಿಸಿ ತೆರಳಿದ್ದಾರೆ. ಈ ವೇಳೆ, ಮಹಿಳೆಯೊಬ್ಬಾಕೆ ನೀರು ಕುಡಿಯಲು ಬಂದಂತೆ ಬಂದು ಪರ್ಸ್ ಎಗರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇನ್ನಷ್ಟೇ ಈ ಬಗ್ಗೆ ದೂರು ದಾಖಲಾಗಬೇಕಿದೆ.