ಸಂಡೂರು: ದೇವದಾರಿ ಹೋರಾಟಕ್ಕೆ ಜನಸಂಗ್ರಾಮ ಪರಿಷತ್ ಬೆಂಬಲ
Sandur, Ballari | Oct 18, 2025 ದೇವದಾರಿ ಪ್ರದೇಶದಲ್ಲಿ ನಡೆಯುತ್ತಿರುವ ಪರಿಸರ ಮತ್ತು ರೈತರ ಹೋರಾಟಕ್ಕೆ ಗ್ರಾಮ ಪರಿಷತ್ ಬೆಂಬಲ ಘೋಷಿಸಿದೆ. ಪರಿಷತ್ ನಾಯಕ ಎಸ್.ಆರ್. ಹಿರೇಮಠ್ ಅವರು ಇಂದು ಶನಿವಾರ ಬೆಳಿಗ್ಗೆ 10ಗಂಟೆಗೆ ತಮ್ಮ ತಂಡದೊಂದಿಗೆ ದೇವದಾರಿ ಪ್ರದೇಶಕ್ಕೆ ತೆರಳಿ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿದರು. ನಿನ್ನೆ ನಡೆದ ಘಟನೆಯ ಕುರಿತು ಚರ್ಚಿಸಿದ ಅವರು, “ನಮ್ಮ ಹೋರಾಟವು ಸಂವಿಧಾನ ನಮಗೆ ನೀಡಿದ ಹಕ್ಕು ಮತ್ತು ಅಧಿಕಾರವನ್ನು ಶಾಂತಿಯುತವಾಗಿ ಬಳಸಿಕೊಳ್ಳುವಂತದ್ದು. ಯಾವುದೇ ಆಮಿಷ ಅಥವಾ ಒತ್ತಡದ ಮುಂದೆ ಕುಗ್ಗದೆ ಹೋರಾಟವನ್ನು ಬಲಪಡಿಸಬೇಕು. ಅಹಿಂಸೆ, ಸತ್ಯ, ಸಮಾಧಾನ ಮತ್ತು ಪ್ರಾಮಾಣಿಕತೆಯೇ ನಮ್ಮ ಹೋರಾಟದ ನಿಜವಾದ ಶಸ್ತ್ರಗಳು,” ಎಂದು ಹೇಳಿದರು. ಹಿರೇಮಠ್ ಅವರು ಯುವಕರನ್ನು ಸಂಘಟನೆಯತ್ತ ಆಕರ್ಷಿಸಿ, ಚಳುವಳಿಗೆ ಹೊಸ ಶಕ್ತಿ ತುಂಬುವAತೆ