ಇಳಕಲ್: ಮತಗಳ್ಳತನ ವಿರೋಧಿ ಆಂದೋಲನದ ಪರವಾದ ಸಹಿ ಸಂಗ್ರಹಕ್ಕೆ ನಗರದಲ್ಲಿ ಚಾಲನೆ ನೀಡಿದ ಶಾಸಕ ಕಾಶಪ್ಪನವರ
Ilkal, Bagalkot | Oct 18, 2025 ಅ.೧೮ ಸಾಯಂಕಾಲ ೭ ಗಂಟೆಯ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ದ ಕಾಂಗ್ರೆಸ ಕಾರ್ಯಾಲಯದಲ್ಲಿ ಹುನಗುಂದ ಹಾಗೂ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ "ವೋಟ್ ಚೋರಿ"(ಮತಗಳ್ಳತನ)ವಿರೋಧಿ ಆಂದೋಲನದ ಪರವಾದ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಸಹಿ ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ " ಪ್ರಜಾಸತ್ತೆಯ ಉಳಿವಿಗಾಗಿನ " ಈ ಹೋರಾಟ ಆಳುವ ಬಿಜೆಪಿ ಪಕ್ಷದಲ್ಲಿ ನಡುಕ ಹುಟ್ಟಿಸಿದೆ. ವಾಮ ಮಾರ್ಗದ ಮುಖೇನ ಯಾವಾಗಲೂ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಬಣ್ಣ ಬದಲಾಗುತ್ತಿದೆ. ರಾಹುಲ್ ಗಾಂಧಿಯವರ ಕೈ ಬಲಪಡಿಸುವ ಉದ್ದೇಶದಿಂದ ಸಹಿ ಸಂಗ್ರಹ ಕಾರ್ಯಕ್ರಮ ನಡೆದ