ದಾಂಡೇಲಿ : ನಗರದ ಸೋಮಾನಿ ವೃತ್ತದಲ್ಲಿ ಹಜರತ್ ಟಿಪ್ಪು ಸುಲ್ತಾನ್ ವೆಲ್ಪೇರ್ ಸೊಸೈಟಿ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಗುರುವಾರ ಸಂಜೆ 7:30 ಗಂಟೆ ಸುಮಾರಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್ ವೆಲ್ಫೇರ್ ಸೊಸೈಟಿ ಅಧ್ಯಕ್ಷರಾದ ಸಲೀಂ ಮುಕಾಶಿ ಅವರು ಮಾತನಾಡಿ ಮೈಸೂರು ಸಾಮ್ರಾಜ್ಯದ ಒಬ್ಬ ಸಮರ್ಥ ಆಡಳಿತಗಾರರಾಗಿದ್ದ ಟಿಪ್ಪು ಸುಲ್ತಾನ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಕೆಚ್ಚೆದೆಯ ಹೋರಾಟಗಾರ ಎಂದರು. ಈ ಸಂದರ್ಭದಲ್ಲಿ ಹಜರತ್ ಟಿಪ್ಪು ಸುಲ್ತಾನ್ ವೆಲ್ಪೇರ್ ಸೊಸೈಟಿಯ ಪದಾಧಿಕಾರಿಗಳಾದ ವಸೀಂ ಶೇಖ, ನಿಜಾಮದ್ದೀನ್ ಶೇಖ, ಯಾಸರ್ ಶೇಖ ಮೊದಲಾದವರು ಉಪಸ್ಥಿತರಿದ್ದರು.