ಮಳವಳ್ಳಿ: ತಾಲ್ಲೂಕಿನ ಡಿ ಹಲಸಹಳ್ಳಿ ಗೇಟ್ ಬಳಿ ಗೂಡ್ಸ್ ಟೆಂಪೋ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಧಾರುಣ ಸಾವು
ಮಳವಳ್ಳಿ : ವೇಗವಾಗಿ ಬರುತ್ತಿದ್ದ ಗೂಡ್ಸ್ ಟೆಂಪೋ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಡಿ ಹಲಸಹಳ್ಳಿ ಗೇಟ್ ಬಳಿ ಜರುಗಿದೆ. ಡಿ ಹಲಸಹಳ್ಳಿ ಗ್ರಾಮದ ವಾಸಿ 44 ವರ್ಷದ ಸತೀಶ್ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು ಭಾನುವಾರ ಸಂಜೆ 8.30 ರ ಸಮಯದಲ್ಲಿ ಈ ಘಟನೆ ಜರುಗಿದೆ. ಕಾರ್ಯನಿಮಿತ್ತ ಹಲಗೂರಿಗೆ ತೆರಳಿದ್ದ ಸತೀಶ್ ವಾಪಸ್ ಡಿ ಹಲಸಹಳ್ಳಿಗೆ ತಮ್ಮ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ಮೇಲೆ ಟೆಂಪೋ ಚಕ್ರ ಹರಿದು ಜೊತೆಗೆ ಟೆಂಪೋ ಅಡಿಗೆ ಸಿಕ್ಕ ಬೈಕ್ ನ್ನು ಸುಮಾರು ದೂರ ಎಳೆದೊಯ್ದಿತ್ತು ಎನ್ನಲಾಗಿದೆ.