ರಾಜ್ಯ ಸರ್ಕಾರ 2026- 27 ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯನ್ನು ಅಧಿಕಾರಿಗಳು 390, ಕೋಟಿ 20 ಲಕ್ಷ 22 ಸಾವಿರ ಕ್ರಿಯಾ ಯೋಜನೆ ಮಾಡಿದ್ದು, ಈ ಅನುದಾನ ಸಾಲುವುದಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಕೊರತೆಯಾಗುತ್ತದೆ ಸರ್ಕಾರ ಹಣ ನೀಡುವುದಾದರೆ ಸುಮಾರು 500 ಕೋಟಿ ರೂ ಹೆಚ್ಚಿನ ಬೇಡಿಕೆ ಅನುಗುಣವಾಗಿ ಪಟ್ಟಿ ಸಿದ್ದ ಮಾಡಿಕೊಂಡು ಹೆಚ್ಚಿನ ಬೇಡಿಕೆಗೆ ಪ್ರಸ್ತಾವನೆ ಕಳುಹಿಸಿ ಎಂದು ಭಾನುವಾರ 11 ಗಂಟೆಗೆ ಶಾಸಕ ಮಾನಪ್ಪ ವಜ್ಜಲ್ ಹೇಳಿದರು. ತಾಲೂಕ ಪಂಚಾಯತ ಸಭಾ ಭವನದಲ್ಲಿ ತಾಲೂಕ ಮಟ್ಟದ 2026-27 ಸಾಲಿನ ತಾಲೂಕು ವಾರ್ಷಿಕ ಕರಡು ಯೋಜನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದವರು.