ಬೆಂಗಳೂರು ಉತ್ತರ: ನಾಣ್ಯಗಳ ಅಧ್ಯಯನ ಪ್ರಾಚೀನ ವಿಜ್ಞಾನ ತಂತ್ರಜ್ಞಾನ ವ್ಯವಸ್ಥೆ ಮೇಲೆ ಬೆಳಕು: ನಗರದಲ್ಲಿ ಪುರಾತತ್ವಶಾಸ್ತ್ರಜ್ಞ ಬಿಪಿನ್ ಚಂದ್ರ ನೇಗಿ
ಪ್ರಾಚೀನ ಕಾಲದ ನಾಣ್ಯಗಳನ್ನ ಅಧ್ಯಯನ ಮಾಡಿದಾಗ ಅವುಗಳನ್ನ ಟಂಕಿಸಲು ನಮ್ಮ ಪ್ರಾಚೀನರು ಕಂಡುಕೊಂಡಿದ್ದ ತಂತ್ರಜ್ಞಾನ ಮತ್ತು ವಿಜ್ಞಾನ ವ್ಯವಸ್ಥೆಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತದ ಅಧೀಕ್ಷಕ ಬಿಪಿನ್ ಚಂದ್ರ ನೇಗಿ ತಿಳಿಸಿದ್ದಾರೆ.ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿ ಮತ್ತು ಚೆನ್ನೈ ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟ್ರಿಕ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮೇ 25ರಂದು ಸಂಜೆ 4 ಗಂಟೆಗೆ ಮಾತನಾಡಿದ ಅವರು, ನಾಣ್ಯಶಾಸ್ತ್ರದ ಅಧ್ಯಯನವನ್ನ ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಮತ್ತಷ್ಟು ವಿಸ್ತರಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.