ಕಂಪ್ಲಿ: ನಗರದ ವಿದ್ಯಾ ಸಾಗರ ಶಾಲೆ ಬಳಿ ರಸ್ತೆ ಕಾಮಗಾರಿಯ ವೇಳೆ ದುರ್ಘಟನೆ, ಕೆಲಸಗಾರನ ಕಾಲಿನ ಮೇಲೆ ಹರಿದ ಕಾಂಕ್ರೀಟ್ ಗಾಡಿ
Kampli, Ballari | Sep 15, 2025 ಸೆಪ್ಟಂಬರ್ 15, ಸೋಮವಾರ ಸಂಜೆ 6ಗಂಟೆಗೆ ರಸ್ತೆ ಕಾಂಕ್ರೀಟ್ ಹಾಕುವ ವೇಳೆ ಕಾಂಕ್ರೀಟ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ, ಕೆಲಸ ಮಾಡುತ್ತಿದ್ದ ಹಾಸನ ಮೂಲದ ರಾಜೇ ಗೌಡ ಎಂಬ ಯುವಕನ ಕಾಲಿನ ಮೇಲೆ ವಾಹನ ಹರಿದಿದೆ. ಇದರಿಂದ ಯುವಕನ ಕಾಲು ಮುರಿದು ಗಂಭೀರ ಗಾಯವಾಗಿದೆ.ಗಾಯಗೊಂಡ ಯುವಕನನ್ನು ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕರೆದೊಯ್ಯಲಾಗಿದೆ.