ಬೆಂಗಳೂರು ಉತ್ತರ: ಪಾಕಿಸ್ತಾನಕ್ಕೆ ಹೋಗಲು ಕಾಲವಕಾಶ ಕೋರಿ ಹೈ ಕೋರ್ಟ್ ಗೆ ರಿಟ್ ಅರ್ಜಿ
ಪಾಕಿಸ್ತಾನಕ್ಕೆ ತೆರಳಲು ಮೇ 15ರವರೆಗೂ ಸಮಯ ಕೋರಿ ಮೂವರು ಪಾಕಿಸ್ತಾನಿ ಮಕ್ಕಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಬೀಬಿ ಯಮೀನಾ, ಮುಹಮ್ಮದ್ ಮುದಸ್ಸಿರ್, ಮುಹಮ್ಮದ್ ಯೂಸುಫ್ ಎಂಬುವರಿಂದ ಅರ್ಜಿ ಸಲ್ಲಿಸಲಾಗಿದೆ. ಪಾಕಿಸ್ತಾನಿ ತಂದೆ, ಮೈಸೂರಿನ ತಾಯಿಗೆ ಜನಿಸಿರುವ ಮೂವರು ಮಕ್ಕಳ ಪರವಾಗಿ ತಾಯಿ ಮೈಸೂರಿನ ರಾಂಷಾ ಜಹಾನ್ ರಿಂದ ಅರ್ಜಿ ಸಲ್ಲಿಸಲಾಗಿದೆ. ಮೇ 6ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ವಿಚಾರಣೆ ಮೇ.8ಕ್ಕೆ ನಿಗದಿಪಡಿಸಿದೆ. ಪಾಕಿಸ್ತಾನಿ ಮುಹಮ್ಮದ್ ಫಾರೂಕ್ ಎಂಬಾತನೊಂದಿಗೆ ರಾಂಷಾ ಜಹಾನ್ ವಿವಾಹ ಅಗಿದ್ರು. 2015 ರಲ್ಲಿ ಪಾಕಿಸ್ತಾನ ಪಿಶಿನ್ ಎಂಬಲ್ಲಿ ಷರಿಯತ್ ನಂತೆ ಇಬ್ಬರ ವಿವಾಹವಾಗಿತ್ತು.