ರಾಣೇಬೆನ್ನೂರು: ರಾಣೆಬೆನ್ನೂರನಲ್ಲಿ ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿ ಗಣೇಶ ಮೂರ್ತಿ ವಿಸರ್ಜನೆ; ಆಯೋಜಕರ ವಿರುದ್ಧ ಬಿತ್ತು ಎಫ್ಐಆರ್
ರಾಣೆಬೆನ್ನೂರು ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ವಿಶ್ವ ಹಿಂದೂ ಪರಿಷತ್ ಭಜರಂಗದಳ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಹಚ್ಚಿದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶ ಮಂಡಳಿ ಅಧ್ಯಕ್ಷ ಅಜಯ್ ಮಠದ, ಬೆಳಗಾವಿಯ ಎಸ್.ಕೆ ಗಾಡಿ ಸೌಂಡ್ ಸಿಸ್ಟಂ ಹಾಗೂ ಬ್ಯಾಡಗಿಯ ಮಂಜುಳಾ ಸೌಂಡ್ ಸಿಸ್ಟಮ್ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.