ಶೈಕ್ಷಣಿಕ ಅಧ್ಯಯನದ ಸಂಶೋಧನೆ ಸಂಯೋಜಿಸುವ ಉದ್ದೇಶದಿಂದ ಡಿಸೆಂಬರ್ 20 ರಂದು 5ನೇ ರಾಯಚೂರು ಜಿಲ್ಲಾ ಅಂತರ್ ಶಾಲಾ ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಸೈಯದ್ ತನ್ವಿರ್ ಅಹ್ಮದ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಯಚೂರು ಅಂತರ್ಶಾಲಾ ವಿಜ್ಞಾನ ಮೇಳಕಾರ್ಯಕ್ರಮವನ್ನು ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ಅವರು ಉದ್ಘಾಟಿಸಲಿದ್ದಾರೆ. ಈ ವಿಜ್ಞಾನ ಮೇಳವು ಸಂಶೋಧನಾ ಆಧಾರಿತ ಉಪಕ್ರಮವಾಗಿದ್ದು, ವೈಜ್ಞಾನಿಕ ವಿಧಾನಗಳ ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತದೆ.