ಕೃಷ್ಣರಾಜಪೇಟೆ: ಅಕ್ಕಿಹೆಬ್ಬಾಳು ಬಳಿ ಜಲಸೂರ್ ಹೈವೆಯಲ್ಲಿ ಅಪರಿಚಿತ ವಾಹನ ಸೈಕಲ್ ಸವಾರನಿಗೆ ಡಿಕ್ಕಿ, ಸೈಕಲ್ ಸವಾರ ಸ್ಥಳದಲ್ಲೇ ಸಾವು
ಕೆ. ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿ ಜಲಸೂರ್ ಹೈವೆಯಲ್ಲಿ ಅಪರಿಚಿತ ವಾಹನ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸಾವು ಸಾವನಪ್ಪಿರುವ ಘಟನೆ ಜರುಗಿದೆ. ಕೆ. ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿ ಜಲಸೂರ್ ಹೈವೆಯಲ್ಲಿ ಘಟನೆ ನಡೆದಿದೆ. ಸೈಕಲ್ನಲ್ಲಿ ತೆರಳುತ್ತಿದ್ದ ದಡದಹಳ್ಳಿ ಗ್ರಾಮದ 62 ವರ್ಷದ ಚನ್ನೇಗೌಡ ಎಂಬ ವೃದ್ಧನಿಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ತಲೆಬುರುಡೆ ಛಿದ್ರಗೊಂಡು ಚನ್ನೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ. ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನವನ್ನು ಪತ್ತೆ ಮಾಡಿಕೊಡುವಂತೆ ಜೊತೆಗೆ ಪರಿಹಾರ ಕೊಡಿಸುವಂತೆ ಕುಟುಂಬ