ಕಲಬುರಗಿ: RSS ಪಥಸಂಚಲನಕ್ಕೆ ವಿರುದ್ಧವಾಗಿ ಅ19 ರಂದು ಚಿತ್ತಾಪುರದಲ್ಲಿ ಭೀಮ್ ಪಥಸಂಚಲನ: ನಗರದಲ್ಲಿ ಅಧ್ಯಕ್ಷ ಸಂತೋಷ ಪಾಳಾ
ಕಲಬುರಗಿ : ಅಕ್ಟೋಬರ್ 19 ರಂದು ಚಿತ್ತಾಪುರ ಪಟ್ಟಣದಲ್ಲಿ ಆರ್ಎಸ್ಎಸ್ ಹಮ್ಮಿಕೊಂಡಿರೋ ಪಥಸಂಚಲನಕ್ಕೆ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ವತಿಯಿಂದ 'ಭೀಮ್ ಪಥಸಂಚಲನ' ಹಮ್ಮಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಸಂಘಟನೆ ರಾಜ್ಯ ಯುವ ಘಕಟದ ಅಧ್ಯಕ್ಷ ಸಂತೋಷ ಪಾಳಾ ಹೇಳಿದ್ದಾರೆ.. ಅ18 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸಚಿವ ಖರ್ಗೆಯವರ ಹೇಳಿಕೆಯನ್ನ ತಪ್ಪಾಗಿ ಅಥೈಯಿಸಿಕೊಂಡು ಅವರಿಗೆ ಕೆಟ್ಟ ಪದಗಳಿಂದ ನಿಂದಿಸಲಾಗಿದೆ ಅಂತಾ ಸಂತೋಷ್ ಪಾಳಾ ಕಿಡಿಕಾರಿದ್ದಾರೆ.