13 ವರ್ಷಗಳಾಗಿ ಶಾಸಕನಾಗಿದ್ದರು ಒಂದೇ ಒಂದು ಸರ್ಕಾರಿ ನೌಕರರನ್ನು ಅಮಾನತ್ತು ಮಾಡಿಸಿದ್ದಾಗಲಿ, ತನಿಖೆ ಮಾಡಿಸಿದ ಉದಾಹರಣೆಗಳು ಇಲ್ಲ ಎಂದು ನಗರ ಶಾಸಕರಾಶಿವರಾಜ ಪಾಟೀಲ್ ಹೇಳಿದರು. ಸರ್ಕಾರಿ ನೌಕರರ ಸಂಘದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು 13 ವರ್ಷದ ಅವಧಿಯಲ್ಲಿ ಸರ್ಕಾರಿ ನೌಕರರ ಬಗ್ಗೆ ದೂರು ಬಂದರೆ, ವಿಶೇಷವಾಗಿ ಶಾಲಾ ಶಿಕ್ಷಕರ ಬಗ್ಗೆ ದೂರು ಬಂದರು ಸಮಸ್ಯೆ ಬಗೆಹರಿಸಿದ್ದೇನೆ ಹೊರತು ಯಾವುದೇ ಅಮಾನತ್ತು ಮಾಡಿಸಿರುವ ಉದಾಹರಣೆ ಇಲ್ಲ ಎಂದರು.