ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಜಯಂತಿ ಹಿನ್ನೆಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ನಾಯಕ ಸಮುದಾಯದ ವತಿಯಿಂದ ಸೋಮವಾರ ಸಂಜೆ 4 ಗಂಟೆಗೆ ನಗರದ ಕನಕ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ್ದು ಮಾಜಿ ಸಚಿವ ಬಿ ಶ್ರೀರಾಮುಲು ಹಾಗೂ ಸಚಿವ ಡಿ ಸುಧಾಕರ್ ಅವರು ಆಗಮಿಸಿದ್ದು ಮೊದಲಿಗೆ ವೇಧಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಿ ಸುಧಾಕರ್ ಅವರು ಎಲ್ಲರಿಗೂ ವೀರ ಮದಕರಿ ನಾಯಕರ ಜಯಂತಿಯ ಶುಭಾಶಯಗಳನ್ನ ತಿಳಿಸಿದ್ದಾರೆ