ರಾಯಚೂರು: ನಗರದ ದಸರಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ತಹಶೀಲ್ದಾರ, ಪೌರಾಯುಕ್ತ; ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಭರ್ಜರಿ ಡ್ಯಾನ್ಸ್
ನಗರದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 29ರ ಸೋಮವಾರ ರಾತ್ರಿ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮದಲ್ಲಿ ತಹಶಿಲ್ದಾರ ಅರುಣ್ ದೇಸಾಯಿ ಹಾಗೂ ನಗರಸಭೆ ಪೌರಾಯುಕ್ತರಾದ ಪಾಂಡುರಂಗ ಇಟಗಿ ಅವರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸೆ.22 ರಿಂದ ಸಿಂಧನೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕಾರ್ಯಕ್ರಮ ಸೊಗಸಾಗಿ ನಡೆಯುತ್ತಿದೆ. ಸೋಮವಾರ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮಕ್ಕೆ ಹೆಸರಾಂತ ಗಾಯಕರು ಆಗಮಿಸಿ ಮನರಂಜನೆ ಕಾರ್ಯಕ್ರಮ ಪ್ರಸ್ತುತ ಪಡಪಡಿಸಿದರು. ಆಗ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮಥದಲ್ಲಿ ಮೇಲಾವುದೋ ಎಂಬ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿರುವುದು ನೋಡುಗರ ಗಮನ ಸೆಳೆಯಿತು.