ಬೆಂಗಳೂರಿನಲ್ಲಿ 'ಕೀಪ್ ಡಿಸ್ಟೆನ್ಸ್, EMI ಪೆಂಡಿಂಗ್' ಎಂಬ ನಾಮಫಲಕ ಅಳವಡಿಸಿದ್ದ ಬೈಕ್ ಸವಾರನೊಬ್ಬರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಸಿಗ್ನಲ್ ಒಂದರಲ್ಲಿ ಈ ವಿಶಿಷ್ಟ ನಾಮಫಲಕವನ್ನು ಅಳವಡಿಸಿದ್ದ ಬೈಕ್ ಕಂಡುಬಂದಿದ್ದು, ಹಿಂಬದಿಯಿಂದ ಬಂದವರು ಇದರ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಕೆಎ 03 ಇಹೆಚ್ 1813 ನೋಂದಣಿಯ ಡಿಯೋ ಬೈಕ್‌ನಲ್ಲಿ ಈ ನಾಮಫಲಕ ಅಳವಡಿಸಲಾಗಿತ್ತು.