ಹಟ್ಟಿ ಪಟ್ಟಣ ಹಾಗೂ ವಿವಿಧ ಗ್ರಾಮದಲ್ಲಿ ಗುರುವಾರ ರಾತ್ರಿ ಮಳೆಯಾಗಿದ್ದು ಪಟ್ಟಣದ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಹಟ್ಟಿ ಪಟ್ಟಣದ 13ನೇ ವಾರ್ಡ್ನ ರಾಮ್ ರಹೀಮ್ ಕಾಲೊನಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಕೆಸರು ತುಂಬಿದೆ. ಬೈಕ್ ಸವಾರರು ಕೆಸರಿನಲ್ಲಿ ಆಯ ತಪ್ಪಿ ಜಾರಿ ಬಿದ್ದ ಉದಾಹರಣೆ ಇವೆ. ನಮ್ಮ ಸಮಸ್ಯೆಯನ್ನು ಆಲಿಸುವವರೆ ಇಲ್ಲದಂತಾಗಿದೆ, ಅಧಿಕಾರಿಗಳಿಗೆ ತಿಳಿಸಿದರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುತ್ತಾರೆ ನಿವಾಸಿಗಳು.