ಸೂಪಾ: ಕಳೆದು ಹೋಗಿದ್ದ ಮೊಬೈಲನ್ನು ಪತ್ತೆ ಹಚ್ಚಿ ಜೋಯಿಡಾ ಪೊಲೀಸ್ ಠಾಣೆಯಲ್ಲಿ ವಾರಿಸುದಾರರಿಗೆ ಒಪ್ಪಿಸಿದ ಪಿಎಸ್ಐ
ಜೋಯಿಡಾ : ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾರ್ಚ್ ತಿಂಗಳಲ್ಲಿ ಸ್ಥಳೀಯ ಬಿಜಿವಿಎಸ್ ಪಿಯು ಕಾಲೇಜಿನ ಉಪನ್ಯಾಸಕ ಪ್ರಕಾಶ ತಗಡಿನಮನಿ ಅವರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಪಿಎಸ್ಐ ಮಹೇಶ ಮಾಳಿಯವರ ನೇತೃತ್ವದಲ್ಲಿ ತನಿಖೆಗಿಳಿದ ಪೊಲೀಸರು ಕಳೆದು ಹೋಗಿದ್ದ ಮೊಬೈಲನ್ನು ಪತ್ತೆ ಹಚ್ಚಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇಂದು ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮಹೇಶ ಮಾಳಿಯವರು ವಾರಿಸುದಾರರಾದ ಪ್ರಕಾಶ ತಗಡಿಮನಿ ಅವರಿಗೆ ಮೊಬೈಲನ್ನು ಒಪ್ಪಿಸಿದ್ದಾರೆ. ಕಳೆದು ಹೋಗಿದ್ದ ಮೊಬೈಲನ್ನು ಪತ್ತೆ ಹಚ್ಚಿ ಮರಳಿ ನೀಡಿದ ಪಿಎಸ್ಐ ಮಹೇಶ ಮಾಳಿಯವರ ಮತ್ತು ಪೊಲೀಸರ ಕಾರ್ಯಕ್ಕೆ ಪ್ರಕಾಶ ತಗಡಿಮನಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.