ಶೋರಾಪುರ: ಕೆಂಭಾವಿ ಪಟ್ಟಣದಲ್ಲಿ ತಡರಾತ್ರಿ ಸುರಿದ ಭಾರಿ ಮಳೆ,ನಾಡಕಛೇರಿ ರಸ್ತೆ ಸಂಪರ್ಕ ಬಂದ್, ಸಾರ್ವಜನಿಕರ ಪರದಾಟ
ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿರುವ ನಾಡಕಚೇರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದು ಸಾರ್ವಜನಿಕರು ಹಾಗೂ ಸವಾರರು ಪರದಾಡುತ್ತಿದ್ದಾರೆ ನಾಡಕಚೇರಿಗೆ ಉಳಿದ ಕೆಲಸಗಳ ನಿಮಿತ್ಯ ಕಚೇರಿಗೆ ಹೋಗುವ ಸಾರ್ವಜನಿಕರಿಗೆ ನೀರು ತುಂಬಿ ರಸ್ತೆ ಸಂಪೂರ್ಣವಾಗಿ ಬಂದಾಗಿದ್ದು ಸದ್ಯ ಕಚೇರಿಗೆ ಹೋಗಲು ಅರಸಾಹಸ ಪಡುತ್ತಿದ್ದಾರೆ. ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಸುಗಮ ರಸ್ತೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಾಗಿದೆ